back to top
Tuesday, June 10, 2025
HomeBloggingಗೂಗಲ್ ಸರ್ಚ್ ಕನ್ಸೋಲ್ ಎಂದರೇನು ? Google Search Console in Kannada

ಗೂಗಲ್ ಸರ್ಚ್ ಕನ್ಸೋಲ್ ಎಂದರೇನು ? Google Search Console in Kannada

Google Search Console in Kannada – ಮೊದಲಿಗೆ ನೀವು ಈ ವಿಷಯವನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದೀರೆಂದರೆ ನಿಮಗೆ ಬ್ಲಾಗಿಂಗ್ ನಲ್ಲಿ ತುಂಬಾನೇ ಆಸಕ್ತಿ ಇದೆ ಅಂತಾನೇ ಅರ್ಥ.

ಗೂಗಲ್ ಎಂಬುದು ವಿಶ್ವದಲ್ಲೇ ಅತೀ ದೊಡ್ಡದಾದ ಸರ್ಚ್ ಇಂಜಿನ್ ಕಂಪನಿ ಆಗಿದೆ. 1998 ನೇ ಇಸವಿಯಲ್ಲಿ ಶುರುವಾದ ಈ ಕಂಪನಿಯು ಇದೀಗ ಪ್ರಪಂಚದಾದ್ಯಂತ 4 ಬಿಲಿಯನ್ ಗೂ ಅಧಿಕ ಬಳಕೆದಾರರನ್ನು ಹೊಂದಿದೆ.

ಈ ಗೂಗಲ್ ಕಂಪನಿಯ ಅನೇಕ ಉಚಿತ ಪ್ರಾಡಕ್ಟ್ ಗಳಲ್ಲಿ ಗೂಗಲ್ ಸರ್ಚ್ ಕನ್ಸೋಲ್” (Google Search Console) ಕೂಡ ಒಂದು. ಇದನ್ನು ಮುಖ್ಯವಾಗಿ ನಮ್ಮ ವೆಬ್ ಸೈಟ್ ನ ಸರ್ಚ್ ರಿಸಲ್ಟ್ ಗಳನ್ನು ನಿರ್ವಹಿಸಲು ಉಪಯೋಗಿಸಲಾಗುತ್ತದೆ.

ಅಂದರೆ ನಾವು ದಿನನಿತ್ಯ ನಮ್ಮ ವೆಬ್ ಸೈಟ್ ಗಳಲ್ಲಿ ಯಾವೆಲ್ಲಾ ಲೇಖನಗಳನ್ನು ಬರೆಯುತ್ತಿವೋ, ಅದನೆಲ್ಲಾ ಗೂಗಲ್ ಸರ್ಚ್ ನಲ್ಲಿ ತೋರಿಸಬೇಕೆಂದರೆ ಈ ಗೂಗಲ್ ಸರ್ಚ್ ಕನ್ಸೋಲ್ ಅನ್ನು ಬಳಸಬೇಕಾಗುತ್ತದೆ.

ಇದರಲ್ಲಿ ಯಾವುದೆಲ್ಲಾ ಚಟುವಟಿಕೆಗಳನ್ನು ಮಾಡಬಹುದು ಎಂಬುದನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ ನೋಡಿ.

1. ವೆಬ್ ಸೈಟ್ ನ ಕಾರ್ಯನಿರ್ವಹಣೆಗಳನ್ನು ಮಾನಿಟರ್ ಮಾಡಬಹುದು.
2. ವೆಬ್ ಸೈಟ್ ನಲ್ಲಿರುವ ದೋಷಗಳನ್ನು ಕಂಡು ಹಿಡಿದು ಅದಕ್ಕೆ ಪರಿಹಾರ ಹುಡುಕಬಹುದು. ವಿಶೇಷವೇನಂದರೆ, ಹೆಚ್ಚಿನ ದೋಷಗಳಿಗೆ ಸ್ವತಃ ಈ ಸರ್ಚ್ ಕನ್ಸೋಲ್ ನಲ್ಲೇ ಪರಿಹಾರ ಇರುತ್ತದೆ.
3. ನಿಮ್ಮ ವೆಬ್ ಸೈಟ್ ನ ಸಂಪೂರ್ಣ ಡೇಟಾ ಇದರಲ್ಲಿ ಕಾಣಬಹುದು. ಅಂದರೆ ಎಷ್ಟು ಕ್ಲಿಕ್ ಗಳು ಬಂದಿವೆ, ಪೇಜ್ ಗಳು ಎಷ್ಟನೇ ಸ್ಥಾನದಲ್ಲಿವೆ ಅಷ್ಟಲ್ಲದೆ ಸೈಟ್ ಗೆ ಬರುವ ಜನರ ದೇಶ ಹಾಗೂ ಅವರು ಯಾವ ಸಾಧನದ ಮೂಲಕ ಭೇಟಿ ನೀಡಿದ್ದಾರೆ ಎಂದು ಕೂಡ ತಿಳಿಯಬಹುದು.
4. ಸೈಟ್ ಮ್ಯಾಪ್ ಮತ್ತು ಒಂದೊಂದೇ ಯು.ಆರ್.ಎಲ್ ಗಳನ್ನು ಸರ್ಚ್ ನಲ್ಲಿ ಬರುವಂತೆ ಕನ್ಸೋಲ್ ನಲ್ಲಿ ಸಲ್ಲಿಸಬಹುದು.
5. ಗೂಗಲ್ ಯಾವ ರೀತಿ ನಿಮ್ಮ ವೆಬ್ ಸೈಟ್ ಅನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ನೋಡಬಹುದು.
6. ಯಾವ ವೆಬ್ ಪೇಜ್ ನಲ್ಲಿ ಏರರ್ ಗಳು ಹಾಗೂ ಎಚ್ಚರಿಕೆಗಳಿವೆ ಎನ್ನುವುದನ್ನು ತಿಳಿಯಬಹುದು.

Google Search Console in Kannada

ಗೂಗಲ್ ಸರ್ಚ್ ಕನ್ಸೋಲ್ (Google Search Console) ಅನ್ನು ಬಳಸುವುದು ಹೇಗೆ? (How to Use Google Search Console in Kannada)

ಬ್ಲಾಗ್ ಅಥವಾ ವೆಬ್ ಸೈಟ್ ಹೊಂದಿರುವವರು, ಗೂಗಲ್ ಸರ್ಚ್ ನಲ್ಲಿ ಹುಡುಕಿದರೆ ಈ ಸರ್ಚ್ ಕನ್ಸೋಲ್ ಸುಲಭವಾಗಿ ಸಿಗುತ್ತದೆ. ಉದಾಹರಣೆಗೆGSCಎಂದು ಸರ್ಚ್ ಮಾಡಿದರೂ ಸಾಕು.

ತದನಂತರ ಇಲ್ಲಿ ನಿಮ್ಮ ವೆಬ್ ಸೈಟ್ ಅಥವಾ ಅಪ್ಲಿಕೇಶನ್ ನ ಲಿಂಕ್ (URL) ಅನ್ನು ನಮೂದಿಸಬೇಕಾಗುತ್ತದೆ.

ಸೈಟ್ ಅನ್ನು ಪರೀಶೀಲನೆ ಮಾಡಲು ಹೆಚ್.ಟಿ.ಎಂ.ಎಲ್ ಟ್ಯಾಗ್ (HTML Tag), ಹೆಚ್.ಟಿ.ಎಂ.ಎಲ್ ಫೈಲ್ ಅಪ್ ಲೋಡ್ (HTML File Upload), ಡೊಮೈನ್ ನೇಮ್ ಪ್ರಾಯೋಜಕರು (Domain Name Provider), ಜಿ. ಎ ಟ್ರ್ಯಾಕಿಂಗ್ ಕೋಡ್ (GA Tracking Code) ಅಥವಾ ಜಿ.ಟಿ.ಎಂ ಕಂಟೈನರ್ ಸ್ನಿಪ್ಪೆಟ್ (GTM Container Snippet) ಗಳಲ್ಲಿ ಯಾವುದಾದರೂ ಒಂದನ್ನು ಬಳಸಬೇಕು.

ಒಂದು ವೇಳೆ ನಿಮ್ಮ ವೆಬ್ ಸೈಟ್ http & https ಎರಡನ್ನೂ ಹೊಂದಿದ್ದರೆ, ಅವುಗಳನ್ನು ಬೇರೆ ಬೇರೆಯಾಗಿ ನಮೂದಿಸಿ. ಸೈಟ್ ಗಳು ಸಬ್ ಡೊಮೈನ್ ಗಳನ್ನು ಹೊಂದಿದ್ದರೂ ಕೂಡ ಅಷ್ಟೇ.

ನೆನಪಿಡಿ: ಗೂಗಲ್ ಸರ್ಚ್ ಕನ್ಸೋಲ್ ಅನ್ನು ಬಳಸುವುದರಿಂದ ನಿಮ್ಮ ವೆಬ್ ಸೈಟ್ ನ ಪೇಜ್ ಗಳ ಶ್ರೇಣಿಯಲ್ಲಿ (Ranking) ಯಾವುದೇ ವ್ಯತ್ಯಾಸ ಆಗುವುದಿಲ್ಲ. ಬದಲಿಗೆ ನೀವು ನಿಮ್ಮ ಪೇಜ್ ಗಳನ್ನು ಯಾವ ರೀತಿಯಲ್ಲಿ ಮುಂದುವರಿಸಬೇಕು ಎನ್ನುವ ಐಡಿಯಾ ಸಿಗುತ್ತದೆ.

ಗೂಗಲ್ ಸರ್ಚ್ ಕನ್ಸೋಲ್ ನ ಮೆಟ್ರಿಕ್ಸ್ ಮತ್ತು ಆಯಾಮಗಳು (Metrics & Dimensions of GSC)

ಸರ್ಚ್ ಕನ್ಸೋಲ್ ಅನ್ನು ಬಳಸುವ ಮೊದಲು ಈ ಕೆಲವು ವಿಷಯಗಳನ್ನು ಅರಿತುಕೊಳ್ಳಿ.

ಇಂಪ್ರೆಷನ್ ಎಂದರೇನು ? (What’s an Impression in Kannada)

ಗೂಗಲ್ ಸರ್ಚ್ ರಿಸಲ್ಟ್ ನಲ್ಲಿ ಬರುವ ಲಿಂಕ್ ಗಳ ವೀಕ್ಷಣೆಯನ್ನು ಇಂಪ್ರೆಷನ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ನೀವು “ಕನ್ನಡ ಬ್ಲಾಗರ್” ಎಂದು ಸರ್ಚ್ ಮಾಡಿದರೆ ನಿಮಗೆ ನಮ್ಮ ಲಿಂಕ್ ಕಾಣಿಸುತ್ತದೆ. ಅಲ್ಲಿಗೆ ಒಂದು ಇಂಪ್ರೆಷನ್ ನಮಗೆ ಬಂದಂತಾಗುತ್ತದೆ.

ಎವರೇಜ್ ಪೊಸಿಷೆನ್ ಎಂದರೇನು ? (What’s an Average Position in Kannada)

ಎವರೇಜ್ ಪೊಸಿಷೆನ್ ಎಂದರೆ ಸರ್ಚ್ ನಲ್ಲಿ ಬರುವ ಲಿಂಕ್ ಗಳ ಸರಾಸರಿ ಸ್ಥಾನ ಆಗಿದೆ. ನೆನಪಿಡಿ, ಇದು ನಿಮ್ಮ ವೆಬ್ ಪೇಜ್ ಗಳ ನಿಖರ ಸ್ಥಾನವನ್ನು ತಿಳಿಸುವುದಿಲ್ಲ.

ಕ್ಲಿಕ್ ಎಂದರೇನು ? (What’s a Click in Kannada)

ಬಳಕೆದಾರನು ಸರ್ಚ್ ರಿಸಲ್ಟ್ ನಲ್ಲಿ ಕಾಣಿಸುವ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿ, ಅದು ಅವನನ್ನು ಬೇರೆ ಪೇಜ್ ಗೆ ಕರೆದುಕೊಂಡು ಹೋದರೆ ಅಲ್ಲಿಗೆ ಒಂದು ಕ್ಲಿಕ್ ಸಿಗುತ್ತದೆ.

ಒಂದು ವೇಳೆ ಆತನು ಆ ಪೇಜ್ ನಿಂದ ಹಿಂದೆ ಬಂದು ಮತ್ತೆ ಪುನಃ ಅದೇ ಲಿಂಕ್ ಅನ್ನು ಒತ್ತಿದರೂ, ಒಂದೇ ಒಂದು ಕ್ಲಿಕ್ ಎಂದು ಪರಿಗಣಿಸಲಾಗುತ್ತದೆ.

ಸಿ.ಟಿ.ಆರ್ ಎಂದರೇನು ? (What’s CTR in Kannada)

ಇದರ ಪೂರ್ಣ ರೂಪ ಕ್ಲಿಕ್-ಥ್ರೂ-ರೇಟ್ {Click-Through-Rate} ಆಗಿದೆ. ಅಂದರೆ “ಕ್ಲಿಕ್ ಅನ್ನು ಇಂಪ್ರೆಷನ್ ನಿಂದ ಭಾಗಿಸಿ, 100 ರಿಂದ ಗುಣಿಸಿದಾಗ ಸಿ.ಟಿ.ಆರ್ ಸಿಗುತ್ತದೆ”.

ಉದಾಹರಣೆಗೆ ನಮ್ಮ ಒಂದು ಲೇಖನವು 40 ಬಾರಿ ಸರ್ಚ್ ನಲ್ಲಿ ಬಂದು 20 ಕ್ಲಿಕ್ ಅನ್ನು ಪಡೆದರೆ, ನಮ್ಮ ಸಿ.ಟಿ.ಆರ್ 50% ಆಗುತ್ತದೆ.

Google Search Console in Kannada

ಇಷ್ಟಲ್ಲದೇ, ಗೂಗಲ್ ಸರ್ಚ್ ಕನ್ಸೋಲ್ ನಲ್ಲಿ ಹಲವಾರು ಫಿಲ್ಟರ್ ಗಳು ಲಭ್ಯವಿದೆ. ನಿಮಗೆ ಬೇಕಾದ ತಾರೀಖಿನ ಡೇಟಾವನ್ನು ನೀವು ನೋಡಬಹುದು ಹಾಗೆಯೇ ಅದರ ಸೂಚ್ಯಂಕವನ್ನು ಗಮನಿಸಿಕೊಳ್ಳಬಹುದು.

ನಿಮ್ಮ ವೆಬ್ ಸೈಟ್ ಅಥವಾ ಬ್ಲಾಗ್ ಗೆ ಅತೀ ಹೆಚ್ಚು ಟ್ರಾಫಿಕ್ ಯಾವ ಪೇಜ್ ನ ಮೂಲಕ ಬರುತ್ತಿದೆ ಹಾಗೂ ಅತೀ ಕಡಿಮೆ ಟ್ರಾಫಿಕ್ ಯಾವ ಪೇಜ್ ಗೆ ಬರುತ್ತಿದೆ ಎನ್ನುವುದನ್ನೂ ಸಹ ನೋಡಬಹುದಾಗಿದೆ.

ಯಾವ್ಯಾವ ಪೇಜ್ ನಲ್ಲಿ ಹೆಚ್ಚು ಬ್ಯಾಕ್ ಲಿಂಕ್ (Backlinks in Kannada) ಗಳಿವೆ ಎಂದು ಇದರಲ್ಲಿ ತಿಳಿಯಬಹುದಾಗಿದೆ ಮತ್ತು ಎ.ಎಂ.ಪಿ ಎರರ್ (AMP Errors) ಗಳನ್ನೂ ಸಹ ಅರಿಯಬಹುದು.

ಇವುಗಳನ್ನು ಹೊರತು ಪಡಿಸಿ ಇನ್ನೂ ಹಲವಾರು ಸಣ್ಣ ಸಣ್ಣ ವಿಷಯಗಳು ಈ ಗೂಗಲ್ ಸರ್ಚ್ ಕನ್ಸೋಲ್ ನಲ್ಲಿ ಕಾಣಲು ಸಿಗುತ್ತದೆ. ಆದರೆ ನಾವಿಲ್ಲಿ ಮುಖ್ಯವಾದ ಅಂಶಗಳನ್ನು ಮಾತ್ರ ಬರೆದಿದ್ದೇವೆ.

ನಿಮ್ಮಲ್ಲಿ ಯಾರಾದರೂ ವೆಬ್ ಸೈಟ್ ಅಥವಾ ಬ್ಲಾಗ್ ಅನ್ನು ಚಲಾಯಿಸುವ ಗುರಿಯನ್ನು ಹೊಂದಿದ್ದರೆ, ನಮ್ಮ ಸಹಾಯ ಸಂಪರ್ಕ (Contact Us) ಪೇಜ್ ಅನ್ನು ಬಳಸಿರಿ.

RELATED ARTICLES
Continue to the category

LEAVE A REPLY

Please enter your comment!
Please enter your name here

Most Popular