Audi S5 in Kannada: ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಹೊಂದಿರುವ ಆಡಿ ಕಂಪನಿಯು ಕಳೆದ ಎರಡು-ಮೂರು ವರ್ಷಗಳಿಂದ ತನ್ನ ಹೆಸರಾಂತ ಸೆಡಾನ್ ಮಾಡೆಲ್ ಗಳಿಂದ ದೇಶದಾದ್ಯಂತ ಹೆಸರು ಮಾಡಿದೆ.
ಈಗಾಗಲೇ ಆಡಿ ಕಂಪನಿಯು S5 ಸ್ಪೋರ್ಟ್ ಬ್ಯಾಕ್ ಎನ್ನುವ ಪವರ್ ಫುಲ್ ಸ್ಪೋರ್ಟ್ ಸೆಡಾನ್ ಕಾರನ್ನು ಬಿಡುಗಡೆ ಮಾಡಿದೆ. ಮ್ಯಾಕ್ಸಿಮಮ್ 500Nm ಟಾರ್ಕ್ ಮತ್ತು 354 hp ಯ ಪವರ್ ಅನ್ನು ಜನರೇಟ್ ಮಾಡುವ ಇದರ ಇಂಜಿನ್, ಸ್ಪೋರ್ಟಿ ಫೀಲಿಂಗ್ ನೀಡುವಲ್ಲಿ ಸಕ್ಷಮವಾಗಿದೆ.
ಕ್ವಾಟ್ರೊ ಪರ್ಮನೆಂಟ್ ಆಲ್ ವೀಲ್ಹ್ ಡ್ರೈವ್ ನೊಂದಿಗೆ ಈ ಕಾರು ನಿಮಗೆ ಸರಿಯಾದ ರೋಡ್ ಗ್ರಿಪ್ ವಾಹನವಾಗಿದೆ.
ಇದರ ವೈಶಿಷ್ಟ್ಯ ಗಳ ಬಗ್ಗೆ ಹೇಳುವುದಾದರೆ, ಈ ಕಾರು ಮ್ಯಾಟ್ರಿಕ್ಸ್ ಎಲ್.ಇ.ಡಿ ಹೆಡ್ ಲ್ಯಾಂಪ್ಸ್ ಹಾಗೂ ಡೈನಾಮಿಕ್ ಟರ್ನ್ ಸಿಗ್ನಲ್ ಗಳನ್ನು ಹೊಂದಿದೆ. ಮಲ್ಟಿ ಫಂಕ್ಷನ್, ಫ್ಲ್ಯಾಟ್ ಬಾಟಮ್ ಸ್ಟಿರಿಂಗ್ ವೀಲ್ಹ್ ಅನ್ನು ಅಳವಡಿಸಲಾಗಿದೆ. ಈ ಸ್ಟಿರಿಂಗ್ ವೀಲ್ಹ್ ಅನ್ನು ಲೆದರ್ ನಿಂದ ಸುತ್ತಲಾಗಿದೆ. ಪ್ಯಾನರೋಮಿಕ್ ಗ್ಲಾಸ್ ಸನ್ ರೂಫ್ ಅನ್ನೂ ಸಹ ಈ ಕಾರು ಹೊಂದಿದೆ.
ಪ್ರಾರಂಭದ ಬೆಲೆ: 79.06 ಲಕ್ಷ ರೂಪಾಯಿಗಳು ( ಎಕ್ಸ್-ಶೋರೂಮ್ ಡೆಲ್ಲಿ )

ಇನ್ನು ಇದರ ಉಳಿದ ಟೆಕ್ನಿಕಲ್ ಡಾಟಾ ಈ ಕೆಳಗಿನಂತಿವೆ.
ಟೆಕ್ನಿಕಲ್ ಡಾಟಾ |
|
---|---|
ಮಾಡೆಲ್ | ಆಡಿ S5 ಸ್ಪೋರ್ಟ್ ಬ್ಯಾಕ್ TFSI ಕ್ವಾಟ್ರೊ |
ಇಂಜಿನ್ ಟೈಪ್ | ಆರು ಸಿಲಿಂಡರ್ ನ ಪೆಟ್ರೋಲ್ ಇಂಜಿನ್. ಡೈರೆಕ್ಟ್ & ಇನ್ ಡೈರೆಕ್ಟ್ ಫ್ಯೂಲ್ ಇಂಜೆಕ್ಷನ್, ಟರ್ಬೋ ಚಾರ್ಜರ್ ಮತ್ತು ಆಡಿ ವಾಲ್ವ್ ಲಿಫ್ಟ್ ನೊಂದಿಗೆ. |
ಡಿಸ್ ಪ್ಲೇಸ್ ಮೆಂಟ್ | 2994CC |
ಡ್ರೈವ್ ಟೈಪ್ | ಕ್ವಾಟ್ರೊ ಪರ್ಮನೆಂಟ್ ಆಲ್ ವೀಲ್ಹ್ ಡ್ರೈವ್ ಆಗಿದೆ. ಸೆಲ್ಫ್ ಲಾಕಿಂಗ್ ಸೆಂಟರ್ ಡಿಫ್ರೆಂಷಿಯಲ್ ನೊಂದಿಗೆ. |
ತೂಕ (ಕೆ.ಜಿ ಗಳಲ್ಲಿ) | ಅನ್ ಲಾಡೆನ್/ ಕರ್ಬ್ ವೇಯ್ಟ್ 1760 ಕೆ.ಜಿ |
ಗ್ರಾಸ್ ವೇಯ್ಟ್ | 2035 ಕೆ.ಜಿ |
ಫ್ಯೂಲ್ ಟ್ಯಾಂಕ್ | 58 ಲೀಟರ್ |
ಟಾಪ್ ಸ್ಪೀಡ್ | 250 kmph ಲಿಮಿಟೆಡ್ |
ಆಕ್ಸಲರೇಷನ್ 0-100 km/h | 4.8 ಸೆಕೆಂಡ್ಸ್ |
ಫ್ಯೂಲ್ ಗ್ರೇಡ್ | ಸೂಪರ್ ಸಲ್ಫರ್ ಫ್ರೀ RON 95 |
ಎಮಿಷನ್ ಸ್ಟ್ಯಾಂಡರ್ಡ್ | ಬಿ.ಎಸ್.6 (BS VI) |
ಎಲ್ × ಡಬ್ಲ್ಯೂ × ಎಚ್ (mm) | 4765 × 1845 × 1390 |
ವೀಲ್ಹ್ ಬೇಸ್ (mm) | 2825 |
ಬೂಟ್ ನ ಸಾಮರ್ಥ್ಯ | 465 ಲೀಟರ್ |