ದಿನದಿಂದ ದಿನಕ್ಕೆ ನಾವು ನಮ್ಮ ಹಣವನ್ನು ದ್ವಿಗುಣಗೊಳಿಸಲು ಪ್ರಯತ್ನ ಪಡುತ್ತಲೇ ಇರುತ್ತೇವೆ. ಶ್ರೀಮಂತರಾಗುವ ಹಂಬಲದಿಂದ ಎಷ್ಟೋ ಜನರು ತಪ್ಪು ಜಾಗಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುತ್ತಾರೆ. ನೀವೂ ಸಹ ಈ ರೀತಿಯ ತಪ್ಪನ್ನು ಮಾಡಿದ್ದರೆ ಇದನ್ನೊಮ್ಮೆ ಸರಿಯಾಗಿ ಓದಿ.
ನೀವೆಲ್ಲರು ಸ್ಥಿರ ಠೇವಣಿ ಅಥವಾ ಎಫ್.ಡಿ {FD in Kannada} ಯ ಬಗ್ಗೆ ಕೇಳಿರುತ್ತೀರಿ. ನಿಮ್ಮ ಹಣವನ್ನು ಒಂದು ನಿರ್ದಿಷ್ಟ ಅವಧಿಯವರೆಗೆ ಬ್ಯಾಂಕ್ ನಲ್ಲಿ ಇಟ್ಟು ಅದಕ್ಕೆ ತಕ್ಕ ಬಡ್ಡಿದರವನ್ನು ಪಡೆಯುವ ವಿಧಾನವೇ ಸ್ಥಿರ ಠೇವಣಿ.
More News: Kannada Blogger News
ಇದು ಹಣವನ್ನು ಡಬಲ್ ಮಾಡಲು ತುಂಬಾ ಒಳ್ಳೆಯ ವಿಧಾನ, ಕೇಳೋಕೆ ಇದರಲ್ಲೇನು ಮೋಸ ಇದೆ ಎಂದು ನೀವು ಭಾವಿಸಬಹುದು. ಆದರೆ ಅಲ್ಲೇ ಇರೋದು ನೋಡಿ ಅಸಲಿಯತ್ತು.
ನಿಮ್ಮ ದುಡ್ಡನ್ನು ಸ್ಥಿರ ಠೇವಣಿಗಳಲ್ಲಿ ಇಡುವ ಮುನ್ನ ಬ್ಯಾಂಕ್ ನವರ ಬಳಿ ನಿಮ್ಮ ಹಣಕ್ಕೆ ಬರುವ ಟಿ.ಡಿ.ಎಸ್ (Tax Deducted at Source) ಎಷ್ಟು ಎಂದು ಒಮ್ಮೆ ಕೇಳಿ. ಟಿ.ಡಿ.ಎಸ್ ಎಂದರೆ ನಿಮ್ಮ ಹಣವನ್ನು ನಿರ್ದಿಷ್ಟ ಅವಧಿಯ ನಂತರ ಹಿಂಪಡೆಯುವಾಗ ಅದಕ್ಕೆ ಬರುವ ತೆರಿಗೆ ಅಥವಾ ಟ್ಯಾಕ್ಸ್ ಆಗಿದೆ. ಈ ತೆರಿಗೆಯು ಸುಮಾರು 10 ರಿಂದ 30 ಶೇಕಡಾದವರೆಗೂ ಇರಬಹುದು. ಇದು ನಿಮ್ಮ ವಾರ್ಷಿಕ ಆದಾಯದ ಮೇಲೆ ಅವಲಂಬಿತವಾಗಿದೆ.

ದೊಡ್ಡ ಮೊತ್ತದ ಹಣವನ್ನು ಸ್ಥಿರ ಠೇವಣಿಯಲ್ಲಿ {FD in Kannada} ಹೂಡಿಕೆ ಮಾಡುವುದು ಅಷ್ಟು ಒಳ್ಳೆಯದಲ್ಲ. ಒಂದು ಲಕ್ಷದ ಒಳಗಿನ ಹಣವನ್ನು ಬೇಕಾದರೆ ಹೂಡಿಕೆ ಮಾಡುವುದು ಉತ್ತಮ ಎಂಬುದು ನಮ್ಮ ಅನಿಸಿಕೆ. ಅಧಿಕ ಹಣವನ್ನು ಹೂಡಿಕೆ ಮಾಡುವುದರಿಂದ ಕೊನೆಗೆ ಅದಕ್ಕೆ ಬರುವ ಬಡ್ಡಿ ಅಸ್ಟಕಷ್ಟೇ.
ಒಮ್ಮೆ ಹಣವನ್ನು ಇಡುವ ಮುನ್ನ ರಿಟರ್ನ್ ಟ್ಯಾಕ್ಸ್ ನ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಸುಮ್ಮನೇ ನಿಮ್ಮ ಹಣವನ್ನು ಹೂಡಿಕೆ ಮಾಡಿ, ಮೂರ್ಖರಾಗಬೇಡಿ.
ಹಾಗಾದರೆ ನಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂದು ನೀವು ಯೋಚಿಸುತ್ತಿರಬಹುದು. ನಿಮಗೆ ಮ್ಯೂಚುವಲ್ ಫಂಡ್ ಒಂದು ಒಳ್ಳೆಯ ದಾರಿಯಾಗಿದೆ. ರಿಸ್ಕ್ ಅಂತೂ ಎಲ್ಲಾ ಸ್ಕೀಮ್ ಗಳಲ್ಲೂ ಇದ್ದೆ ಇದೆ. ಹಣವನ್ನು ಇಡುವ ಮುನ್ನ ದಾಖಲೆಗಳಲ್ಲಿರುವ ಎಲ್ಲಾ ನಿಯಮ-ನಿಬಂಧನೆಗಳನ್ನು ಸರಿಯಾಗಿ ಓದಿ.