ಸೌಂದರ್ಯ ಎನ್ನುವುದು ನಮಗೆಲ್ಲರಿಗೂ ಇಷ್ಟವಾದ ಸಂಗತಿ. ನಮ್ಮ ಚರ್ಮ ಕಾಂತಿಯನ್ನು ಕಾಪಾಡಿಕೊಳ್ಳಲು ನಾವು ಎಷ್ಟು ಕಷ್ಟ ಪಡುತ್ತೇವೆ ಅಲ್ಲವೇ ? ಹಾಗೆ ನಮ್ಮ ಕಾಂತಿಯುತವಾದ ಚರ್ಮವನ್ನು ಕಾಪಾಡಲು ಇಲ್ಲಿದೆ ನೋಡಿ ಪ್ರಭಾವಶಾಲಿಯಾದ ದಾರಿಗಳು.
ಬಿಸಿಲಿನಿಂದ ನಮ್ಮ ಸೌಂದರ್ಯವನ್ನು ಕಾಪಾಡುವುದು ಹೇಗೆ ?
ಸೂರ್ಯನ ತಾಪಮಾನ ದಿಂದ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬಹಳ ಲಾಭ ಮತ್ತು ನಷ್ಟಗಳು ಉಂಟಾಗಬಹುದು ! ಸೂರ್ಯನ ಅತೀವ ತಾಪದಿಂದ ನಮ್ಮ ದೇಹದ ಚರ್ಮವು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಬಚಾವಾಗಬೇಕೆಂದರೆ, ಈ ಕೆಳಗಿನ ಸಲಹೆಗಳನ್ನು ಅಳವಡಿಸಿಕೊಳ್ಳಿ.
1. ಸನ್ ಕ್ರೀಮ್ ಬಳಸುವುದು.
2. ಹೊರಗಿನಿಂದ ಬಂದ ತಕ್ಷಣ ಮುಖವನ್ನು ಫೇಸ್ ವಾಷ್ ನಿಂದ ಚೆನ್ನಾಗಿ ತೊಳೆದುಕೊಳ್ಳಿ.
3. ಆಯುರ್ವೇದಿಕ್ ಕ್ರೀಮ್ ಗಳನ್ನು ಬಳಸುವುದು.
4. ಮಾಸ್ಕ್ ಹಾಗೂ ಸ್ಕಾರ್ಫ್ ಗಳನ್ನು ಬಳಸಿಕೊಳ್ಳಿ.

ಆಹಾರ ಪದ್ಧತಿ ಹೇಗೆ ?
ನಮ್ಮ ದೇಹ ಕಾಂತಿಯನ್ನು ಕಳೆದುಕೊಳ್ಳುವುದಕ್ಕೆ ನಾವು ತಿನ್ನುವ ಆಹಾರವು ಮುಖ್ಯ ಕಾರಣ. ಹೌದು, ನಿಮ್ಮ ತ್ವಚೆ ಚೆನ್ನಾಗಿರಬೇಕೆಂದರೆ ಈ ಕೆಳಗಿನ ಆಹಾರ ಪದ್ಧತಿಯನ್ನು ಪಾಲಿಸಿ.
1. ರಾತ್ರಿ ಊಟದ ಬದಲಾಗಿ ಚಪಾತಿಯನ್ನು ಸೇವಿಸುವುದು.
2. ವಿಟಮಿನ್ ಯುಕ್ತ ಆಹಾರವನ್ನು ಸೇವನೆ ಮಾಡುವುದು.
3. ತರಕಾರಿಗಳನ್ನು ಹೆಚ್ಚಾಗಿ ತಿನ್ನುವುದು.
ಈ ಮೇಲಿನ ಸೂಚನೆಗಳನ್ನು ಏಕಾಗ್ರತೆ ಯಿಂದ ಓದಿ ಹಾಗೆ ಸರಿಯಾಗಿ ಪಾಲಿಸಿದರೆ ಕೆಲವೇ ತಿಂಗಳುಗಳಲ್ಲಿ ನಿಮ್ಮ ಸೌಂದರ್ಯ ಹೆಚ್ಚುತ್ತದೆ. ಕೆಮಿಕಲ್ ಯುಕ್ತ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ ಹಾಗೂ ಇತರ ಯಾವುದೇ ರೀತಿಯ ವಸ್ತುಗಳನ್ನು ಅಂದರೆ ಮಾರುಕಟ್ಟೆಯಲ್ಲಿ ಸಿಗುವ ವಿಷಪೂರಿತ ವಸ್ತುಗಳನ್ನು ಜಾಸ್ತಿ ಬಳಸಬೇಡಿ.
ಇದನ್ನೂ ಓದಿ: ಸ್ಥಿರ ಠೇವಣಿಯ ಬಗ್ಗೆ ಮಾಹಿತಿ