ಸ್ಕೋಡಾ ಕಂಪನಿಯ ತನ್ನ ಹೊಸ ಓಕ್ಟಾವಿಯ ಸ್ಪೋರ್ಟ್ ಲೈನ್ ವೇರಿಯಂಟ್ ಅನ್ನು ಆರ್.ಎಸ್ ಸ್ಟೈಲ್ ನಲ್ಲಿ ಅನಾವರಣಗೊಳಿಸಿದೆ.
ಹಳೆಯ ಓಕ್ಟಾವಿಯಗಿಂತ ತುಂಬಾನೇ ವಿಭಿನ್ನ ರೀತಿಯಲ್ಲಿ ತೋರುವ ಸ್ಪೋರ್ಟ್ ಲೈನ್ ಕಾರು, ಸ್ಟೈಲ್ ಮತ್ತು ಆರ್.ಎಸ್ ಬಾಡಿ ಸ್ಟೈಲಿಂಗ್ ಗೆ ಪಕ್ಕಾ ಹೇಳಿ ಮಾಡಿಸಿದಂತಿದೆ. ಹೊಸ ಹೊಸ ವಿಶೇಷ ಫೀಚರ್ಸ್ ಗಳೊಂದಿಗೆ ಸದ್ಯದಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಈ ಕಾರು ಬರಲಿದೆ ಎಂದು ಸ್ಕೋಡಾ ತಿಳಿಸಿದೆ.
ಬ್ಲ್ಯಾಕ್ ಔಟ್ ಗ್ರಿಲ್, ಸ್ಪೋರ್ಟ್ ಲೈನ್ ಎಲ್.ಇ.ಡಿ ಲೈಟಿಂಗ್, 3 ವಿಧ ವಿಧವಾದ ಅಲೋಯ್ ವೀಲ್ಹ್ ಗಳು, ಬ್ಲ್ಯಾಕ್ ಔಟ್ ಆಗಿರುವ ಔಟ್ ಸೈಡ್ ರಿಯರ್ ವೀವ್ ಮಿರರ್ ಗಳು, ರಿಯರ್ ಟೇಲ್ ಗೇಟ್ ನಲ್ಲಿ ಸ್ಕೋಡಾ ಎಂಬೋಸಿಂಗ್ ಅನ್ನು ನೀಡಲಾಗಿದೆ. ಇಂಟಿಗ್ರೇಟೆಡ್ ಹೆಡ್ ರೆಸ್ಟ್ ನೊಂದಿಗೆ ಸ್ಪೋರ್ಟ್ಸ್ ಸೀಟ್ ಗಳನ್ನು ಕೂಡ ಅಳವಡಿಸಲಾಗಿದೆ.
Also Read: ಆಡಿ S5 ಸ್ಪೋರ್ಟ್ ಬ್ಯಾಕ್: ಪವರ್ ಫುಲ್ ಸ್ಪೋರ್ಟ್ ವೇರಿಯಂಟ್
ಕಾರಿನ ರಿಯರ್ ಟೇಲ್ ಲ್ಯಾಂಪ್ ಗಳನ್ನು ಬ್ಲ್ಯಾಕ್ ಸ್ಮೋಕ್ ನಿಂದ ಸ್ಟೈಲಿಂಗ್ ಮಾಡಲಾಗಿದೆ. ರಿಯರ್ ವೈಪರ್, ಕ್ರೋಮ್ ಫಿನಿಶ್ ಎಕ್ಸ್ ಹೋಸ್ಟ್ ಟೇಲ್ ಪೈಪ್, ಫ್ರಂಟ್ ಹೆಡ್ ಲೈಟ್ ವಾಶರ್ ಗಳನ್ನು ಸಹ ಸೇರಿಸಲಾಗಿದೆ.
ಇನ್ನು ಕಾರಿನ ಇಂಜಿನ್ ನ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ ಒಟ್ಟು 4 ವಿಧವಾದ ಇಂಜಿನ್ ನ ಆಯ್ಕೆ ನಿಮಗೆ ಲಭ್ಯವಿದೆ. ಪೆಟ್ರೋಲ್, ಡೀಸೆಲ್, ಸಿ.ಎನ್.ಜಿ ಪವರ್ ಟ್ರೇನ್ ಹಾಗೂ ಪ್ಲಗ್-ಇನ್ ಹೈಬ್ರಿಡ್ ಇಂಜಿನ್ ನ ಆಯ್ಕೆಗಳು ಇವೆ.

ಈ ಹೊಸ ಸ್ಕೋಡಾ ಓಕ್ಟಾವಿಯ ಸ್ಪೋರ್ಟ್ ಲೈನ್ ಕಾರಿನಲ್ಲಿ ಎರಡು ರೀತಿಯ ಪೆಟ್ರೋಲ್ ಎಂಜಿನ್ ನ ಆಯ್ಕೆಗಳನ್ನು ನೀಡಲಾಗಿದೆ. ಮೊದಲನೆಯದು, 1.5 ಲೀಟರ್ ನ ಟಿ.ಎಸ್.ಐ ಎಂಜಿನ್. ಇದು ಸುಮಾರು 148 ಬಿ.ಎಚ್.ಪಿ ಪವರ್ ಅನ್ನು ಉತ್ಪಾದನೆ ಮಾಡುತ್ತದೆ. ಎರಡನೆಯದು, 2.0 ಲೀಟರ್ ನ ಟಿ.ಎಸ್.ಐ ಎಂಜಿನ್. ಇದು 189 ಬಿ.ಎಚ್.ಪಿ ಪವರ್ ಅನ್ನು ಉತ್ಪಾದಿಸುತ್ತದೆ.
ಇನ್ನು ಇದರ ಪ್ಲಗ್-ಇನ್ ಹೈಬ್ರಿಡ್ ಮಾದರಿಯು 202 ಬಿ.ಎಚ್.ಪಿ ಪವರ್ ಅನ್ನು ಉತ್ಪಾದಿಸಬಲ್ಲದು. ಸಿ.ಎನ್.ಜಿ ಟ್ರಿಮ್ ಗಳು ಸುಮಾರು 128 ಬಿ.ಎಚ್.ಪಿ ಪವರ್ ಅನ್ನು ಉತ್ಪಾದನೆ ಮಾಡುತ್ತವೆ ಎಂದು ಹೇಳಲಾಗುತ್ತಿದೆ. ಪೆಟ್ರೋಲ್ ಎಂಜಿನ್ ನ ಮಾದರಿಗಳೊಂದಿಗೆ 7 ಸ್ಪೀಡ್ ಡಿ.ಎಸ್.ಜಿ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಜೋಡಿಸಲಾಗಿದೆ.
ಓಕ್ಟಾವಿಯ ಸ್ಪೋರ್ಟ್ ಲೈನ್ ಕಾರು 2 ವೀಲ್ಹ್ ಡ್ರೈವ್ ಹಾಗೂ 4 ವೀಲ್ಹ್ ಡ್ರೈವ್ ವೇರಿಯಂಟ್ ನಲ್ಲೂ ಸಹ ಬಿಡುಗಡೆಗೊಳ್ಳಲಿದೆ.