ಭಾರತದ ಮಾರುಕಟ್ಟೆಗೆ ಬರಲಿದೆ ಹೊಸ ವೋಕ್ಸ್ ವ್ಯಾಗನ್ ಪೋಲೊ ಹ್ಯಾಚ್ ಬ್ಯಾಕ್ – Volkswagen Polo in Kannada

0
volkswagen polo matte in kannada

ವೋಕ್ಸ್ ವ್ಯಾಗನ್ ಕಂಪನಿಯು ತನ್ನ ಪೋಲೊ ಕಾರಿನ 7ನೇ ಆವೃತ್ತಿಯ ಹ್ಯಾಚ್ ಬ್ಯಾಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. [Volkswagen Polo in Kannada].

ಜರ್ಮನಿಯ ಆಟೋಮೊಬೈಲ್ ಕಂಪನಿಯೊಂದು ಪೋಲೊ ಕಾರಿನ ಮೇಟ್ ಎಡಿಷನ್ ಒಂದನ್ನು ಈಗಾಗಲೇ ರಿಲೀಸ್ ಮಾಡಿದ್ದಾರೆ. ಈ ವರ್ಷದ ಹಬ್ಬಗಳ ಅವಧಿಯಲ್ಲಿ ಹೊಸ ಪೋಲೊ ಹ್ಯಾಚ್ ಬ್ಯಾಕ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.

Also Read: Skoda Octavia Sportline in Kannada

ಸದ್ಯ ವೋಕ್ಸ್ ವ್ಯಾಗನ್ ಕಂಪನಿಯು ಭಾರತದಲ್ಲಿ ತಮ್ಮ ಎಸ್.ಯು.ವಿ ಶ್ರೇಣಿಯಲ್ಲಿ ಮುನ್ನುಗ್ಗಲು ನಿರ್ಧಾರ ಮಾಡಿರಬಹುದು. ಆದರೆ ಜರ್ಮನಿಯ ಕಾರು ತಯಾರಕನಿಗೆ ತನ್ನ ಹ್ಯಾಚ್ ಬ್ಯಾಕ್ ಮಾದರಿಯ ಪೋಲೊ ಕಾರಿನ ಯೋಜನೆಯನ್ನು ಭಾರತದಲ್ಲಿ ತೊರೆಯುವ ಮನಸ್ಸಿಲ್ಲ. ಪ್ರಸ್ತುತ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಹೊಸ ತಲೆಮಾರಿನ ಪೋಲೊ ಕಾರು, 2025ರ ಸುಮಾರಿಗೆ ಭಾರತೀಯ ತೀರಕ್ಕೆ ಬರಬಹುದು ಎಂದು ಕಾರು ತಯಾರಕರು ಸುಳಿವು ನೀಡಿದ್ದಾರೆ.

volkswagen polo matte in kannada

ಪೋಲೊ ಹ್ಯಾಚ್ ಬ್ಯಾಕ್ ಕಾರು ಭಾರತಕ್ಕೆ ವೋಕ್ಸ್ ವ್ಯಾಗನ್ ಕಂಪನಿಯು ನೀಡಿರುವ ಅತೀ ಅಮೂಲ್ಯವಾದ ಕೊಡುಗೆ ಆಗಿದೆ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಅಗ್ರ ಮಾದರಿಯ ಕಾರು ಇದಾಗಿದೆ. ಕಂಪನಿಯು, ಕಳೆದ ತಿಂಗಳು ಸುಮಾರು 15,085 ಯೂನಿಟ್ ಗಳನ್ನು ಮಾರಾಟ ಮಾಡಿದೆ.

ಆರನೇ ತಲೆಮಾರಿನ ಪೋಲೊ ಮಾದರಿಯು MQB A0 ಫ್ಲಾಟ್ ಫಾರ್ಮ್ ಅನ್ನು ಆಧರಿಸಿದ್ದರೆ, ಹೊಸ ಏಳನೇ ತಲೆಮಾರಿನ ಕಾರುಗಳು MQB A0 IN ಆಧರಿಸಿವೆ. ಭಾರತದಲ್ಲಿ ಬಿಡುಗಡೆಗೊಳ್ಳುವ ಪೋಲೊ ಕಾರಿನ ವೀಲ್ಹ್ ಬೇಸ್ ನಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಏಕೆಂದರೆ ಹೊರ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಾರಿನ ಉದ್ದ 4 ಮೀಟರ್ ಗಿಂತಲೂ ಅಧಿಕವಾಗಿದೆ. ಇದೇ ಆಯಾಮದೊಂದಿಗೆ ಈ ಕಾರನ್ನು ಭಾರತಕ್ಕೆ ತಂದರೆ, ತೆರಿಗೆಯಲ್ಲಿ ಪರಿಣಾಮ ಬೀರಬಹುದು.

NO COMMENTS

LEAVE A REPLY

Please enter your comment!
Please enter your name here